Home

 

ಸಿಂಧನೂರು ನಗರ ವ್ಯಾಪ್ತಿಯ ನಕಾಶೆಗಳು

Sindhanur Old & New Map

Circulation Pattern

Local Planning Area 

 Municipal Reform Cell, Directorate of  Municipal Administration has won the Bronze Award for the Project Aasthi (GIS based property  tax information system) in National Awards for e-Governance 2011

 

 

ಸಿಂಧನೂರು ತಾಲೂಕು ರಾಯಚೂರು ಜಿಲ್ಲೆಯಲ್ಲಿ ಪ್ರಸಿದ್ಧ ತಾಲೂಕಾ ಕೇಂದ್ರವಾಗಿದೆ. ಬೀದರ್ , ಬೆಂಗಳೂರು, ಹೈದ್ರಾಬಾದ್, ಹುಬ್ಬಳ್ಳಿ, ರಾಯಚೂರು, ಬೆಳಗಾಂ ರಾಜ್ಯ ಹೆದ್ದಾರಿಗಳು ಈ ತಾಲೂಕಿನ ಮೂಲಕ ಹೋಗುತ್ತವೆ. ಸಂಯೋಜಿತ ಬೀದರ್ ಶ್ರೀರಂಗಪಟ್ಟಣಗಳನ್ನು ಸೇರಿಸುವ ರಾಷ್ಟ್ರೀಯ ಹೆದ್ದಾರಿ ಇದರ ಮೂಲಕ ಸಾಗುತ್ತದೆ. ತುಂಗಭದ್ರಾ ಜಲಾಶಯದ ವರದಾನದಿಂದಾಗಿ ಇಂದು ಇದು ಭತ್ತದ ಕಣಜವೆನಿಸಿದೆ. ಇಲ್ಲಿಯ ಉತ್ತಮ ಅಕ್ಕಿಗೆ ವಿದೇಶಿಗಳ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ. ತಾಲೂಕಿನ ಕೇಂದ್ರ ಸ್ಥಳವಾದ ಸಿಂಧನೂರು ನಗರ ಅತಿ ಶೀಘ್ರದಲ್ಲಿ ಬೆಳೆಯುತ್ತಿದೆ. ಇದರೊಂದಿಗೆ ನಗರ ಆಧುನಿಕ ನಾಗರಿಕತೆಯನ್ನು ಅಳವಡಿಸಿಕೊಳ್ಳಲು ಹವಣಿಸಿತ್ತಿದೆ. ಸಿಂಧನೂರಿಗೆ ಬಹು ಪ್ರಾಚೀನ ಇತಿಹಾಸವಿದೆ. ಸಿಂಧನೂರು ಹೆಸರು ಹನ್ನೆರಡರ ಶತಮಾನದ ಶಾಸನದಲ್ಲಿ ಉಲ್ಲೇಖಿಸಿರುವುದು ಗೊತ್ತಾಗುತ್ತದೆ. ಕುಷ್ಟಗಿ ತಾಲೂಕಿನ ಪುರ ಕ್ಷೇತ್ರದಲ್ಲಿ ಬರೆಯಿಸಿದ ಶಾಸನ ಒಂದರಲ್ಲಿ ಸಿಂಧನೂರು ಹೆಸರು ಪ್ರಥಮವಾಗಿ ದೊರೆಯುತ್ತದೆ.  ನಂತರ ಕ್ರಿ.ಶ. 1067 ರಲ್ಲಿ ಕಲ್ಯಾಣಿ ಚಾಲುಕ್ಯ ನೊರ್ಮಡಿ ತೈಲಪನ ಕಾಲದಲ್ಲಿ ಬರೆಯಿಸಿದ ಸಾಲಗುಂದೆ ಶಾಸನದಲ್ಲಿ ಸಿಂಧನೂರು ಪದ ಉಕ್ತವಾಗಿದೆ, ಪಾಲಪಿಳ್ಳೆ ಮರಾಶೆಯಾಗಿರೆ ಸಿಂಧನೂರು ಪದಮೊಪ್ಪೆ ಎಂದು ಉಲ್ಲೇಖಿಸಲಾಗಿದೆ.2001 ರ ಜನಗಣತಿಯ ಪ್ರಕಾರ ಸಿಂಧನೂರು ನಗರಸಭೆಯು 61262 ಜನಸಂಖ್ಯೆ ಹೊಂದಿರುತ್ತದೆ. ಸಿಂಧನೂರು ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡಗಳಿದ್ದು, 31 ಚುನಾಯಿತ ಸದಸ್ಯರುಗಳು ಮತ್ತು 05 ಜನ ನಾಮನಿರ್ದೇಶನ ಸದಸ್ಯರುಗಳು ಇರುತ್ತಾರೆ. ಸಿಂಧನೂರು ತಾಲೂಕ ರಾಯಚೂರು ಜಿಲ್ಲೆಯಲ್ಲಿ ಪ್ರಸಿದ್ಧ ತಾಲೂಕ ಕೇಂದ್ರವಾಗಿದೆ.

 

ಶಾಸನಗಳು ಒಂದು ಜನಾಂಗದ ಬದುಕಿನ ಉನ್ನತಿ ಮತ್ತು ಉದಾರತೆಯ ದ್ಯೋತಕಗಳು. ಆ ನಾಡಿನ ಭವ್ಯ ಪರಂಪರೆಯನ್ನು ಸಾರುವ ಶಾಸನಗಳು ಇತಿಹಾಸದ ಬಹುಮುಖ್ಯ ದಾಖಲೆಗಳು. ಸಿಂಧನೂರು ತಾಲೂಕಿನಲ್ಲಿ ಸುಮಾರು 53 ಶಾಸನಗಳು ದೊರೆತಿವೆ. ಕಾಲಗರ್ಭದಲ್ಲಿ ಹೊತುಹೊದ ಇನ್ನೂ ಅನೇಕ ಶಾಸನಗಳ ಶೋಧನಾ ಕಾರ್ಯ ನಡೆಯಬೇಕಾಗಿದೆ. ಈಗ  ಉಪಲಬ್ಧವಾಗಿರುವ ಶಾಸನಗಳು ನಮ್ಮ ತಾಲೂಕಿನ ರಾಜಕೀಯ , ಜನರ ಜೀವನ ಉದಾತ್ತ ಗುಣಗಳನ್ನು ವರ್ಣಿಸುತ್ತವೆ.

         The district of Raichur was a part of Hyderabad State till the reorganization of states on 1st November 1956. The recorded history of the district is traced as far as the third century BC. The fact that three minor rock edicts of Ashoka are found in this district, one at Maski in the Lingasugur Taluka and the other two near Sindhanur prove that this area was included in the dominion of great Mouryan King Ashoka (273-236 B.C.).

         Sindhanur town is an important commercial, industrial and educational center in the Raichur district. Vijayanagara kings and Sultans ruled the town. The town was ruled by the name this king. After that the town was called as Sindhanur. In and around the Sindhanur town some of the following famous temples exist. Ambadevi temple at Somalapur village. Murari temple at Mukkunda village. Somanatha temple at Pura village. – This belongs to Kushtagi taluka.One masjid was constructed by the king Aurangazeb at a distance of 1.6 Km from this town. It occupies a central place in the Tungabhadra Ayacut area in the district and is an important centre of development activities under the Tungabhadra project.Lakshmi Narayana and Nagareshwara temple at Balaganur.Uliyameshwara temple at Devaragudi.Kalleshwara Temple at Mallikarjuna temple at Jaalihaal e.t.c.,

 

 

 

 

 

 

 

 

                   

 

No. Of Visitors :
Last Updated   : 16/05/2012  Release History
Release 2.0.0, Powered By Karnataka Municipal Data Society & maintained by Sindhanur CMC
This website can best viewed with the resolution 1024 * 768 using Internet Explorer 7.0 or above.
Valid CSS!